03 ಜೂನ್ 2008

ದೇವರು...



ಗಿರಿ ಕಾನನಗಳ ನಡುವಿನ ಸುಂದರ ಪ್ರಶಾಂತ ದೇಗುಲದೊಳಗೆ ಕೈಮುಗಿದು ಬಾ "ಯಾತ್ರಿಕ"ನೇ.....

02 ಜೂನ್ 2008

ಈ ಬಾನಿನಲ್ಲಿ...



ಈ ಬಾನು ....

ಈ ಭುವಿ ಎಷ್ಟು ಸೊಗಸು...

ಅಲ್ಲಿಯ ಚಿತ್ತಾರ ನೀಡುವುದು ಮನಸ್ಸಿನಾಳದಿ ಮುದ...

ಬೆಳ್ಳಿ ಚುಕ್ಕಿ ಬಾನಿನಲ್ಲಿ ಏನೆಲ್ಲಾ ಇದೆ..?

21 ಮೇ 2008

ಎಲ್ಲಿಗೆ ಪಯಣ...



ಚುನಾನಣೆ ಮುಗಿದಿದೆ...

ಇಬ್ಬರೂ ಸ್ಪರ್ಧಿಗಳೇ....

ಒಬ್ಬರು ಪುತ್ತೂರು ... ಇನ್ನೊಬ್ಬರು ಸುಳ್ಯ...

ಇಬ್ಬರದೂ ಗುರಿಯೊಂದೇ ದಾರಿ ಬೇರೆ ಬೇರೆ....!!

ತಲಪುವರೇ ಇವರಿಬ್ಬರು ಗುರಿಯೆಡೆಗೆ....?????

[ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತೆಗೆದ ಚಿತ್ರ]

16 ಮೇ 2008

ದಾರಿ......




ಇದು ದಾರಿ.... ಸವೆದ ದಾರಿ... ನಡೆದಷ್ಟು .. ನಡೆದಾಡಿದ "ಹೆದ್ದಾರಿ"

ಹಾಗಾಗಿ ಸವೆದಿದೆ..... ಸವೆಯುತ್ತಿದೆ....

ಬದುಕಲ್ಲೂ ಹಾಗಲ್ಲವೇ..?

ಬದುಕಿನ ನಡೆಯಲ್ಲಿ.. ಸಮಾಜದ ಮಧ್ಯೆ ನಡೆದಷ್ಟು ಬದುಕು ಸವೆಯುವುದು.... ಎಲ್ಲರ ದಾರಿಯಾಗುವುದು....?

ಆದರೆ ಆ ದಾರಿ ವಿವಾದವಾದರೆ....? ನಡೆದಾಡುವ ಮಂದಿಯೇ ವಿರಳ..... ದಾರಿ ಬಲು ಶೂನ್ಯ......!!

ಆಗ ಒಂಟಿ ದಾರಿ..!!?

15 ಮೇ 2008

ನೆಲವ ಬಿಟ್ಟು ನೀರ ಮೇಲೆ....



ನೆಲವ ಬಿಟ್ಟು ನೀರ ಮೇಲೆ...!

ನೀರಿನೊಳಗಾದಾಗ ನೋಡುವವರೇ ಹಲವಾರು.... ಎನ್ನ ರಕ್ಷಿಸುವವರಾರು ......!!?

ನಮ್ಮ ಬದುಕಲ್ಲೂ ಹಾಗಲ್ಲವೇ....

ಗೆದ್ದಾಗ ಹತ್ತಿರವಿದ್ದವರು .... ಸೋತಾಗ ನೋಡುವವರೇ ಎಲ್ಲರು.....!

ಎತ್ತಲು ಬರುವವರು ಯಾರು....??


[ಚಿತ್ರವನ್ನು ನನ್ನ ಮಿತ್ರ ಆತ್ಮ ಕಳುಹಿಸಿದ್ದು]

14 ಮೇ 2008

ಚುನಾವಣಾ ಕಾವು[ಗೆ]...?



ರಾಜ್ಯದಲ್ಲಿ ವಿಪರೀತ ಕಾವು ಏರಿದೆ!!?.

ಕಾಗೆಯೊಂದು ಚುನಾವಣಾ ಕಾವು ಎದುರಿಸಲಾಗದೆ ನೀರಿನೊಳಗೆ ಕುಳಿತು ದೇಹವನ್ನು ತಂಪಾಗಿಸುತ್ತಿದೆಯೇ...?

"ಕಾಕ"ತಾಳೀಯವಾಗಿ ಕಾಗೆಯೊ0ದುನೀರಿನ ಟ್ಯಾಂಕೊಂದಕ್ಕೆ ಇಳಿದಾಗ ಕಂಡದ್ದು ಹೀಗೆ.....

"ನಾನು".... ಪ್ರತಿಬಿಂಬ...



ಹಾಗೇ ಸುಮ್ಮನೆ ತೆಗೆದ ಚಿತ್ರ ನನಗೆ ಖುಷಿ ಕೊಟ್ಟಿತು.ಅದಕ್ಕೆ ಸುಮ್ಮನೆ ಇಲ್ಲಿ ಪ್ರತಿಬಿಂಬಿಸಿದೆ. "ನಾನು" ನನ್ನ "ಪ್ರತಿಬಿಂಬ"

25 ಏಪ್ರಿಲ್ 2008

ತಂತಿ-ಬೆಂಕಿಯ ಆಟ...?




"ತಂತಿ"ಯೊಳಗೆ ಬೆಳಕೇ..? "ಬೆಳಕಿ"ನೊಳಗೆ ತಂತಿಯೇ..?

ಎಲ್ಲವೂ ಚಂಚಲ.... ಇದು ಅದುವೋ... ಅದು ಇದುವೋ...?

ನಾಗಾಲೋಟದ ಮನಸ್ಸಿಗೆ ಹೊಳೆಯುವುದು ನೂರೆಂಟು ಯೋಚನೆ.. ಹತ್ತಾರು ಕಲ್ಪನೆ...

ಆದರೆ ನಿಜಾಂಶ ಅರಿತಾಗ.......
"ಅದೆಲ್ಲವೂ" ಭ್ರಮೆ...!!?

24 ಏಪ್ರಿಲ್ 2008

ತಾಳ ತಪ್ಪಿದಾಗ.....



ತಾಳ ತಪ್ಪಿದಾಗ ಪರದೆಯ ಹಿಂದಿನ ಕಸರತ್ತು...!

ಆಸರೆಯಾದರು ಒಂದಷ್ಟು ಜನ.... ಉಳಿಯಿತು ಮಾನ...!

ಬದುಕಿನ ವೇದಿಕೆಯಲ್ಲೂ ಹಾಗಲ್ವೇ...!?.

ತಾಳ ತಪ್ಪಿದಾಗ...... ಪರದೆ ಸರಿಯುವ ಹೊತ್ತು ಬಂದಾಗ....

ಬರುವರೇ ಅಷ್ಟು ಜನ...? ನೆರವಾಗುವರೇ "ನಮ್ಮ" ಜನ...?

ಪರದೆಯ ಮುಂದೆ ನಾವೊಬ್ಬರೇ....

ಅದರ ಹಿಂದೆ ಜನರಿದ್ದರೇ ನಾವು "ಜನ"..ಇಲ್ಲದಿದ್ದರೆ ನಾವು "ನಿರ್ಜನ"

19 ಏಪ್ರಿಲ್ 2008

ಹೊತ್ತು ಮುಳುಗುವ ಹೊತ್ತು....



ಸೂರ್ಯ ಮುಳುಗುವ ಸಮಯ....

ತುರ್ತು... ಅವಸರ... ಗೂಡು ಸೇರಿಕೊಳ್ಳುವ ತವಕ....

ಬದುಕಲ್ಲೂ ಹಾಗಲ್ಲವೇ...?

ಬದುಕಿನ ಮುಸ್ಸಂಜೆಯಲ್ಲಿ ಎಲ್ಲವೂ ತುರ್ತು....

ಅವರನ್ನು... ಇವರನ್ನು ನೋಡುವ.. ಮಾತನಾಡುವ ತವಕ...

"ಗೂಡು" ಸೇರುವ ತನಕ....!

16 ಏಪ್ರಿಲ್ 2008

ಅರಳಿದ ಹೂವು....



ಒಂದು ಮಳೆಯು ಇಳೆಗೆ ಬೀಳಲು ..

ಅರಳೀತು ಹೇಗೆ ಹೂವು [ಲಿಲ್ಲಿ]

ಬದುಕಲ್ಲೂ ಹಾಗೇ ಅರಳೀತೇ ಪ್ರೀತಿ..?

ಕರುಣೆ ಇಲ್ಲದ ಮೇಲೆ ಅರಳೀತು ಹೇಗೆ.....?

12 ಏಪ್ರಿಲ್ 2008

"ಒಡಲಿ"ಗೆ "ಕೊಡಲಿ".....!?



"ಒಡಲಿಗೆ" ಸೇರುವ ಕಶ್ಮಲವ ತಡೆವವರಾರು...?

ಅಲ್ಲೊಂದಿಷ್ಟು.... ಇಲ್ಲೊಂದಿಷ್ಟು "ಮಲಿನ"ಗಳು ಸೇರುತ್ತಲೇ ಹೋಗುತ್ತವೆ.....

ಆದರೂ ಅದೆಲ್ಲ ತೊಡೆದು ಹಾಕಲಾರದೆ..... ಒಡಲೊಳಗೆ ಸೇರದಂತೆ ಮಾಡಲಾಗದೆ....

ಅಸಹಾಯಕ ಈ ಬಡ ಜೀವ..... ನೋಡುತ್ತಾ .... ನೋಡುತ್ತಾ ಕೂರುತಿದೆ ಹಾಗೆ ಸುಮ್ಮನೆ.....

10 ಏಪ್ರಿಲ್ 2008

ಬದುಕಿನ ಪಯಣ....?



ಇದು "ಬದುಕಿ"ನ ಪಯಣ.....

ಬದುಕಿನ ಹಾದಿಯಲ್ಲಿ ಕಂಡ "ಹೂವಿನ" ನೆನಪುಗಳು ಎಷ್ಟು ಚಂದ....

"ದೋಣಿ"ಯಲ್ಲಿ ಕುಡುಗೋಲು ಹಾಕಲು "ಒಬ್ಬನೇ".......!!

ಆದರೂ "ದಡ" ಸೇರದ ಬದುಕು.....! ಸಾಗಬೇಕು ದೂರ.... ದೂರ....?

ಇನ್ನೆಷ್ಟು ದೂರ "ತೀರ"ವ ಸೇರಲು....?


[ಚಿತ್ರ :"ನೆಟ್" ನೋಟ]

08 ಏಪ್ರಿಲ್ 2008

ಮರೆಯದ ನೆನಪುಗಳು......




ಬದುಕಿನ ಸಂಜೆಯಲ್ಲಿ ಪಯಣ.....

ದಾರಿ ಯಾವುದೋ....! ನಡೆ ಎಲ್ಲಿಗೋ...?

ಆದರೆ ಅದುವರೆಗಿನ ನಡೆ-ನುಡಿ ಸತ್ಯ....

ನೊಗ ಬಿಚ್ಚಿದ ಎತ್ತಿನಂತೆ, ಗಾಡಿ ಕಳಚಿದ ಚಕ್ರದಂತೆ...ನಿತ್ಯ ಸತ್ಯ...

[ಚಿತ್ರ ಮಾತ್ರಾ : "ನೆಟ್" ನೋಟ]

06 ಏಪ್ರಿಲ್ 2008

"ದೂರ"ದ ಬೆಟ್ಟ...



ದೂರದ ಬೆಟ್ಟ ಕಣ್ಣಿಗೆ ನುಣ್ಣನೆ.....

ಹತ್ತಿರ ... ಹತ್ತಿರ ... ಸಾಗಿದಷ್ಟು ಅದರ ಅಂತರ್ಯದ ಅರಿವಾಗುತ್ತದೆ.....

ಬದುಕಿನ ಪಥದಲ್ಲೂ ಅಂತಹವರು ಎಷ್ಟು ಮಂದಿ...??