06 ಡಿಸೆಂಬರ್ 2008

ಇಳಿ ಹೊತ್ತಲ್ಲಿ ಹುಡು ಗಾಟ




ಬದುಕೆಂಬ ಪಯಣದ ಆರಂಭದಲ್ಲಿ...

ಅಲ್ಲೆಲ್ಲಾ ಹುಡುಕಾಟ....

ಆಗ ಅದೆಲ್ಲಲೂ ಮರಳಿನ ಆಟ...

22 ನವೆಂಬರ್ 2008

ಸುಂದರ ನೋಟದ ಹಿಂದೆ...



ಸುಂದರ ನೋಟವಿದು... ಕಣ್ತುಂಬ ನೋಡಿ ಮರುಳಾದೆ...

ದಿಗಂತದತ್ತ ನೆಟ್ಟ ದೃಷ್ಠಿಯಲ್ಲಿ ಸೃಷ್ಠಿಯಾಯಿತು ಕನಸುಗಳ ಕೂಸುಗಳು...




ಆ ಕನಸುಗಳಿಗೆಲ್ಲಾ ಬಂತು ರೆಕ್ಕೆ ಪುಕ್ಕ...

ಅವು ಬಲಿತಾಗ ಆಗಿತ್ತು ಬರೀ ಕಾರ್ಗತ್ತಲು...

ಅವುಗಳ ಮುಂದೆ .. ಹಿಂದಲ್ಲವೇ ಬದುಕು...

ಕೆಲವೊಮ್ಮೆ ಆ ಕತ್ತಲ ಹಿಂದೆ ಬದುಕು... ಇನ್ನೊಮ್ಮೆ ಆ ಕತ್ತಲ ಮುಂದೆ...

17 ನವೆಂಬರ್ 2008

ಪೊಸಡಿಗುಂಪೆಯೆಂಬ ಮಾಯೆ....



ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ..

ಪ್ರಕೃತಿಯ ಸೊಬಗು ಏನು ಆನಂದ...




ಈ ಸೊಬಗ ಸವಿದು ಮನದುಂಬಿ ಬಂದಾಗ

ಹೊಸ ಹುರುಪು... ಹೊಸ ಭಾವನೆ... ಅದರ ಹರಿವು...

25 ಅಕ್ಟೋಬರ್ 2008

ಪಾಲಿಗೆ ಬಂದದ್ದು...




ಪೇಟೆಯ ಪ್ಲಾಸ್ಟಿಕ್ ನಮ್ಮ ಆಹಾರ...

ನಗರದ ಕೊಳಚೆ ನಮ್ಮ ಶುದ್ಧ ಜಲ....

ಕಾಪಾಡುವ ಜನರಾರು ನಮ್ಮ.....

22 ಅಕ್ಟೋಬರ್ 2008

ನೆರಳು - ಬೆಳಕಿನ ಆಟ..




ಬೆಂಕಿ ಬಿದ್ದಿದೆ ಕಾಡಿಗೆ ...!!

ಬೇಗ ಬನ್ನಿ.. ಓ.. ನನ್ನ ರಕ್ಷಕರೇ....!?

21 ಅಕ್ಟೋಬರ್ 2008

ಮಂಗಚೇಷ್ಟೆ....



ಮಂಗಚೇಷ್ಟೆ... ಇದು ಮಂಗಚೇಷ್ಟೆ..

ಬೈಕ್ ಮೇಲೆ ಸವಾರಿ ಮಾಡಿದರೆ ಹೇಗಿರುತ್ತೆ ...

ಒಮ್ಮೆ ಬೈಕ್ ನಲ್ಲಿ ಹೋಗಿ ಬರಲಾ...

ನೀವೂ ನಂಜೊತೆ ಬರ್ತೀರಾ ...

ಕೀಟಲೆ ಮಾಡಬೇಡಿ ಪ್ಲೀಸ್... ಅನ್ನುತ್ತಿದೆಯಂತೆ "ಆ" ಮಂಗ...

10 ಅಕ್ಟೋಬರ್ 2008

ಕಲ್ಲರಳಿ ..... ಹೂವಾಗಿ.....






ಕಲ್ಲು ಅರಳಿದಾಗ ಕಾಣುವ ಸೊಬಗು ....

ನೋಡಲು ಬಲು ಅಂದ...

ಕಲ್ಲುಗಳ ಕುಂಡವೇ ಹೂವಿಗೆ ಆಸರೆಯಾದಾಗ

ಅದು ಕಲ್ಲರಳಿ ಹೂವಾದಂತೆಯೇ...

07 ಅಕ್ಟೋಬರ್ 2008

ಮಾರ್ನಮಿ ವೇಷ...




ಬಂತು ದಸರಾ ನಾಡ ಹಬ್ಬ...

ಎಲ್ಲೆಲ್ಲೂ ಕಾಣುತಿದೆ ವೇಷ ಭೂಷಣಗಳ ಅವತಾರ...

ಅಲ್ಲಲ್ಲಿ ಡಂಗ್ ಟಕ್ರ್ ... ಡಂಗ್ ಟಕ್ರ್... ಟಕ್.. ಟಕ್....

ಅದರೊದಿಗೆ ಹೆಜ್ಜೆ ಹಾಕುವ ಹುಲಿ...

ಈ ನಡುವೆ ಬರುವವರು.. ಬಂದು ಕಾಡುವವರು ವೇಷಧಾರಿಗಳು....

....... ಬಹುಕೃತ ವೇಷಂ.....????

21 ಸೆಪ್ಟೆಂಬರ್ 2008

ಶಿಲೆಗಳು... ಹಾಡಿವೆ...



ಶಿಲೆಗಳು ಸಂಗೀತವಾ ಹಾಡಿವೆ...!?

ಎಲ್ಲೆಲ್ಲೂ ಮಾಡಿವೆ ಸದ್ದು ಗದ್ದಲಗಳ...

ಇದೂ ನೋಡಲು ಅಂದವಾ...

28 ಆಗಸ್ಟ್ 2008

ಕಲ್ಲು ಚಪ್ಪರ..




ಇದು ಕಲ್ಲು ಚಪ್ಪರ ...

ಸುಸ್ತಾಗಿ ಬಂದವರಿಗೆ ನೆರವಾಗಬಲ್ಲ ಚಪ್ಪರ..

22 ಆಗಸ್ಟ್ 2008

ಬಾ(ಭಾ)ಳ ಪಯಣ...??






ದೋಣಿ ಸಾಗಲಿ ಮುಂದೆ ಹೋಗಲಿ .....

ಈಗ ನಮಗೆ ತೀರ ಸೇರಲಿ....

ಮಳೆಯು ಬಂದರೆ ಬೇಗ ಬೇಗನೆ ತೀರವ ಸೇರಲಿ....

ಇದು ನಮ್ಮ ಹಳ್ಳಿಯೊಳಗಿನ ಬದುಕಿನ ನೋಟ...

16 ಆಗಸ್ಟ್ 2008

ಯಾರೆಂದು ಬಲ್ಲಿರಿ....??




ಹಳ್ಳಿಯಲ್ಲಿ ಇಲ್ಲ ಗದ್ದೆಗಳು...!

ಇದ್ದೆಡೆಯೂ ಬೆಳೆಯಿಲ್ಲ...!

ಬೆಳೆಯಿರುವಲ್ಲಿ ಹುಡುಗರೂ ಇಲ್ಲ....!?

ಹಾಗಾಗಿ ಈಗ ಒಡೆಯ ನಾನೆ ಎಂದು ಬೀಗುತಿದೆಯೇ ಕೋಳಿ ತಲೆಯೆತ್ತಿ..!!??

15 ಆಗಸ್ಟ್ 2008

ಜಲ ಜಲಲ ಧಾರೆ...



ಇದು ನೀರ ಧಾರೆ...

ಪ್ರೀತಿಯ ಧಾರೆ...

ಇಬ್ಬನಿಯ ಮುತ್ತಿನ ಧಾರೆ....

ಮನಸ್ಸಿನ ಆನಂದದ ಹೊಳೆ...

14 ಆಗಸ್ಟ್ 2008

ಬಿಸಲೆಯ ನೋಟ..



ಸುತ್ತಲೂ ಗಿರಿ ಕಾನನದ ಸುಂದರ ನೋಟ..

ಹರಿಯುವ ನದಿಯು ಜುಳು ಜುಳು ಸದ್ದು..

ಮುತ್ತಿಕ್ಕುವ ಮಂಜಿನ ಹನಿಗಳು...

ಇನ್ನೇನು ಬೇಕು ಈ ಮನಸ್ಸು ಹಾರಾಡಲು..

03 ಜೂನ್ 2008

ದೇವರು...



ಗಿರಿ ಕಾನನಗಳ ನಡುವಿನ ಸುಂದರ ಪ್ರಶಾಂತ ದೇಗುಲದೊಳಗೆ ಕೈಮುಗಿದು ಬಾ "ಯಾತ್ರಿಕ"ನೇ.....

02 ಜೂನ್ 2008

ಈ ಬಾನಿನಲ್ಲಿ...



ಈ ಬಾನು ....

ಈ ಭುವಿ ಎಷ್ಟು ಸೊಗಸು...

ಅಲ್ಲಿಯ ಚಿತ್ತಾರ ನೀಡುವುದು ಮನಸ್ಸಿನಾಳದಿ ಮುದ...

ಬೆಳ್ಳಿ ಚುಕ್ಕಿ ಬಾನಿನಲ್ಲಿ ಏನೆಲ್ಲಾ ಇದೆ..?

21 ಮೇ 2008

ಎಲ್ಲಿಗೆ ಪಯಣ...



ಚುನಾನಣೆ ಮುಗಿದಿದೆ...

ಇಬ್ಬರೂ ಸ್ಪರ್ಧಿಗಳೇ....

ಒಬ್ಬರು ಪುತ್ತೂರು ... ಇನ್ನೊಬ್ಬರು ಸುಳ್ಯ...

ಇಬ್ಬರದೂ ಗುರಿಯೊಂದೇ ದಾರಿ ಬೇರೆ ಬೇರೆ....!!

ತಲಪುವರೇ ಇವರಿಬ್ಬರು ಗುರಿಯೆಡೆಗೆ....?????

[ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತೆಗೆದ ಚಿತ್ರ]

16 ಮೇ 2008

ದಾರಿ......




ಇದು ದಾರಿ.... ಸವೆದ ದಾರಿ... ನಡೆದಷ್ಟು .. ನಡೆದಾಡಿದ "ಹೆದ್ದಾರಿ"

ಹಾಗಾಗಿ ಸವೆದಿದೆ..... ಸವೆಯುತ್ತಿದೆ....

ಬದುಕಲ್ಲೂ ಹಾಗಲ್ಲವೇ..?

ಬದುಕಿನ ನಡೆಯಲ್ಲಿ.. ಸಮಾಜದ ಮಧ್ಯೆ ನಡೆದಷ್ಟು ಬದುಕು ಸವೆಯುವುದು.... ಎಲ್ಲರ ದಾರಿಯಾಗುವುದು....?

ಆದರೆ ಆ ದಾರಿ ವಿವಾದವಾದರೆ....? ನಡೆದಾಡುವ ಮಂದಿಯೇ ವಿರಳ..... ದಾರಿ ಬಲು ಶೂನ್ಯ......!!

ಆಗ ಒಂಟಿ ದಾರಿ..!!?

15 ಮೇ 2008

ನೆಲವ ಬಿಟ್ಟು ನೀರ ಮೇಲೆ....



ನೆಲವ ಬಿಟ್ಟು ನೀರ ಮೇಲೆ...!

ನೀರಿನೊಳಗಾದಾಗ ನೋಡುವವರೇ ಹಲವಾರು.... ಎನ್ನ ರಕ್ಷಿಸುವವರಾರು ......!!?

ನಮ್ಮ ಬದುಕಲ್ಲೂ ಹಾಗಲ್ಲವೇ....

ಗೆದ್ದಾಗ ಹತ್ತಿರವಿದ್ದವರು .... ಸೋತಾಗ ನೋಡುವವರೇ ಎಲ್ಲರು.....!

ಎತ್ತಲು ಬರುವವರು ಯಾರು....??


[ಚಿತ್ರವನ್ನು ನನ್ನ ಮಿತ್ರ ಆತ್ಮ ಕಳುಹಿಸಿದ್ದು]

14 ಮೇ 2008

ಚುನಾವಣಾ ಕಾವು[ಗೆ]...?



ರಾಜ್ಯದಲ್ಲಿ ವಿಪರೀತ ಕಾವು ಏರಿದೆ!!?.

ಕಾಗೆಯೊಂದು ಚುನಾವಣಾ ಕಾವು ಎದುರಿಸಲಾಗದೆ ನೀರಿನೊಳಗೆ ಕುಳಿತು ದೇಹವನ್ನು ತಂಪಾಗಿಸುತ್ತಿದೆಯೇ...?

"ಕಾಕ"ತಾಳೀಯವಾಗಿ ಕಾಗೆಯೊ0ದುನೀರಿನ ಟ್ಯಾಂಕೊಂದಕ್ಕೆ ಇಳಿದಾಗ ಕಂಡದ್ದು ಹೀಗೆ.....

"ನಾನು".... ಪ್ರತಿಬಿಂಬ...



ಹಾಗೇ ಸುಮ್ಮನೆ ತೆಗೆದ ಚಿತ್ರ ನನಗೆ ಖುಷಿ ಕೊಟ್ಟಿತು.ಅದಕ್ಕೆ ಸುಮ್ಮನೆ ಇಲ್ಲಿ ಪ್ರತಿಬಿಂಬಿಸಿದೆ. "ನಾನು" ನನ್ನ "ಪ್ರತಿಬಿಂಬ"

25 ಏಪ್ರಿಲ್ 2008

ತಂತಿ-ಬೆಂಕಿಯ ಆಟ...?




"ತಂತಿ"ಯೊಳಗೆ ಬೆಳಕೇ..? "ಬೆಳಕಿ"ನೊಳಗೆ ತಂತಿಯೇ..?

ಎಲ್ಲವೂ ಚಂಚಲ.... ಇದು ಅದುವೋ... ಅದು ಇದುವೋ...?

ನಾಗಾಲೋಟದ ಮನಸ್ಸಿಗೆ ಹೊಳೆಯುವುದು ನೂರೆಂಟು ಯೋಚನೆ.. ಹತ್ತಾರು ಕಲ್ಪನೆ...

ಆದರೆ ನಿಜಾಂಶ ಅರಿತಾಗ.......
"ಅದೆಲ್ಲವೂ" ಭ್ರಮೆ...!!?

24 ಏಪ್ರಿಲ್ 2008

ತಾಳ ತಪ್ಪಿದಾಗ.....



ತಾಳ ತಪ್ಪಿದಾಗ ಪರದೆಯ ಹಿಂದಿನ ಕಸರತ್ತು...!

ಆಸರೆಯಾದರು ಒಂದಷ್ಟು ಜನ.... ಉಳಿಯಿತು ಮಾನ...!

ಬದುಕಿನ ವೇದಿಕೆಯಲ್ಲೂ ಹಾಗಲ್ವೇ...!?.

ತಾಳ ತಪ್ಪಿದಾಗ...... ಪರದೆ ಸರಿಯುವ ಹೊತ್ತು ಬಂದಾಗ....

ಬರುವರೇ ಅಷ್ಟು ಜನ...? ನೆರವಾಗುವರೇ "ನಮ್ಮ" ಜನ...?

ಪರದೆಯ ಮುಂದೆ ನಾವೊಬ್ಬರೇ....

ಅದರ ಹಿಂದೆ ಜನರಿದ್ದರೇ ನಾವು "ಜನ"..ಇಲ್ಲದಿದ್ದರೆ ನಾವು "ನಿರ್ಜನ"

19 ಏಪ್ರಿಲ್ 2008

ಹೊತ್ತು ಮುಳುಗುವ ಹೊತ್ತು....



ಸೂರ್ಯ ಮುಳುಗುವ ಸಮಯ....

ತುರ್ತು... ಅವಸರ... ಗೂಡು ಸೇರಿಕೊಳ್ಳುವ ತವಕ....

ಬದುಕಲ್ಲೂ ಹಾಗಲ್ಲವೇ...?

ಬದುಕಿನ ಮುಸ್ಸಂಜೆಯಲ್ಲಿ ಎಲ್ಲವೂ ತುರ್ತು....

ಅವರನ್ನು... ಇವರನ್ನು ನೋಡುವ.. ಮಾತನಾಡುವ ತವಕ...

"ಗೂಡು" ಸೇರುವ ತನಕ....!

16 ಏಪ್ರಿಲ್ 2008

ಅರಳಿದ ಹೂವು....



ಒಂದು ಮಳೆಯು ಇಳೆಗೆ ಬೀಳಲು ..

ಅರಳೀತು ಹೇಗೆ ಹೂವು [ಲಿಲ್ಲಿ]

ಬದುಕಲ್ಲೂ ಹಾಗೇ ಅರಳೀತೇ ಪ್ರೀತಿ..?

ಕರುಣೆ ಇಲ್ಲದ ಮೇಲೆ ಅರಳೀತು ಹೇಗೆ.....?

12 ಏಪ್ರಿಲ್ 2008

"ಒಡಲಿ"ಗೆ "ಕೊಡಲಿ".....!?



"ಒಡಲಿಗೆ" ಸೇರುವ ಕಶ್ಮಲವ ತಡೆವವರಾರು...?

ಅಲ್ಲೊಂದಿಷ್ಟು.... ಇಲ್ಲೊಂದಿಷ್ಟು "ಮಲಿನ"ಗಳು ಸೇರುತ್ತಲೇ ಹೋಗುತ್ತವೆ.....

ಆದರೂ ಅದೆಲ್ಲ ತೊಡೆದು ಹಾಕಲಾರದೆ..... ಒಡಲೊಳಗೆ ಸೇರದಂತೆ ಮಾಡಲಾಗದೆ....

ಅಸಹಾಯಕ ಈ ಬಡ ಜೀವ..... ನೋಡುತ್ತಾ .... ನೋಡುತ್ತಾ ಕೂರುತಿದೆ ಹಾಗೆ ಸುಮ್ಮನೆ.....

10 ಏಪ್ರಿಲ್ 2008

ಬದುಕಿನ ಪಯಣ....?



ಇದು "ಬದುಕಿ"ನ ಪಯಣ.....

ಬದುಕಿನ ಹಾದಿಯಲ್ಲಿ ಕಂಡ "ಹೂವಿನ" ನೆನಪುಗಳು ಎಷ್ಟು ಚಂದ....

"ದೋಣಿ"ಯಲ್ಲಿ ಕುಡುಗೋಲು ಹಾಕಲು "ಒಬ್ಬನೇ".......!!

ಆದರೂ "ದಡ" ಸೇರದ ಬದುಕು.....! ಸಾಗಬೇಕು ದೂರ.... ದೂರ....?

ಇನ್ನೆಷ್ಟು ದೂರ "ತೀರ"ವ ಸೇರಲು....?


[ಚಿತ್ರ :"ನೆಟ್" ನೋಟ]

08 ಏಪ್ರಿಲ್ 2008

ಮರೆಯದ ನೆನಪುಗಳು......




ಬದುಕಿನ ಸಂಜೆಯಲ್ಲಿ ಪಯಣ.....

ದಾರಿ ಯಾವುದೋ....! ನಡೆ ಎಲ್ಲಿಗೋ...?

ಆದರೆ ಅದುವರೆಗಿನ ನಡೆ-ನುಡಿ ಸತ್ಯ....

ನೊಗ ಬಿಚ್ಚಿದ ಎತ್ತಿನಂತೆ, ಗಾಡಿ ಕಳಚಿದ ಚಕ್ರದಂತೆ...ನಿತ್ಯ ಸತ್ಯ...

[ಚಿತ್ರ ಮಾತ್ರಾ : "ನೆಟ್" ನೋಟ]

06 ಏಪ್ರಿಲ್ 2008

"ದೂರ"ದ ಬೆಟ್ಟ...



ದೂರದ ಬೆಟ್ಟ ಕಣ್ಣಿಗೆ ನುಣ್ಣನೆ.....

ಹತ್ತಿರ ... ಹತ್ತಿರ ... ಸಾಗಿದಷ್ಟು ಅದರ ಅಂತರ್ಯದ ಅರಿವಾಗುತ್ತದೆ.....

ಬದುಕಿನ ಪಥದಲ್ಲೂ ಅಂತಹವರು ಎಷ್ಟು ಮಂದಿ...??

02 ಏಪ್ರಿಲ್ 2008

ನೊಗವ ಬಿಚ್ಚಿ ಕಾಯುವ.....



ನೇಗಿಲಯೋಗಿಯ ಮಿತ್ರ....ನೊಗವ ಬಿಚ್ಚಿ ಗಾಡಿ ಕಾಯುವ....!

ದಿನವಿಡೀ ದುಡಿದು ಸುಸ್ತಾಗಿ ಕೊನೆಗೊಂದು ನಿಮಿಷದ ವಿಶ್ರಾಂತಿ...

ಆದರೂ ಇವ ನೇಗಿಲಯೋಗಿಗೆ ಶರಣು.. ನೇಗಿಲಯೋಗಿ ಇವನಿಗೆ ಶರಣು...

ಬದುಕೂ ಹಾಗಲ್ಲವೇ,"ಇವನು - ಅವನಿಗೆ" : "ಅವನು - ಇವನಿಗೆ"....

ಹಾಗಿದ್ದರೇ ಪರಿಪೂರ್ಣ...!!

01 ಏಪ್ರಿಲ್ 2008

ಚೆಲುವಿನ ಚಿತ್ತಾರ .....!?





ಶಿಲೆಗಳು ಸಂಗೀತವಾ.......ಅಲ್ಲ ಇದು ಸಂಗೀತವಲ್ಲ.....

ಶಿಲೆಗಳು ಚಿತ್ತಾರವ ಮೂಡಿಸಿವೆ....ನೀರ ಹರಿವೆಗೆ ತಿದ್ದಿ ತೀಡಿದ ಸ್ಪರ್ಶ....?

ಕೊನೆಗೂ ಮನಮೋಹಕ "ಚೆಲುವಿನ ಚಿತ್ತಾರ"....!?

ಮನಸ್ಸಿನೊಳಗೂ ಅದೆಷ್ಟು "ಚಿತ್ತಾರ"ಗಳು....!?

29 ಮಾರ್ಚ್ 2008

ಮೋಡ ಕವಿದ ಬಾನಿನಲ್ಲಿ...



ಕುಕ್ಕೆಯಲ್ಲೀಗ ಮೋಡ ಕವಿದ ಬಾನು....

ಒಳಗೂ..... ಹೊರಗೂ.....

ಮಾಧ್ಯಮಗಳಲ್ಲೂ ಹಾಗೆಯೇ.... ಮಿಂಚು... ಮಳೆಯದ್ದೇ ಸುದ್ದಿ....

ಆದರೆ ಅದೆಲ್ಲವೂ "ಅಕಾಲ ಮಳೆ".....!?

ಅಲ್ಲಿ ರೈತನಿಗೆ ಉಪಟಳ ನೀಡಲು....ಇಲ್ಲಿ!!?

23 ಮಾರ್ಚ್ 2008

"ಭೂತ" ಕಾಲ....!!?



"ಭೂತ"ಕಾಲದ ಅನುಭವ....

ವರ್ತಮಾನದ ಹಾದಿಗೆ ನೆರವಾದೀತೇ.....

ಇವೆರಡೂ ಭವಿಷ್ಯದ ಬದುಕನ್ನು ಭದ್ರವಾಗಿಸಬಲ್ಲುದೇ..?

ಇವೆಲ್ಲವನ್ನೂ ನೆನಪಿಸುವುದೇ "ಭೂತ"ವೇ..?

21 ಮಾರ್ಚ್ 2008

ಹೊರ ನೋಟ.....?



ಒಳಗಿದ್ದಾಗ ಒಂಟಿ ಎಂಬ ಭಾವ....ಒಂಟಿ ದಾರಿ... ಒಂಟಿ ಗುರಿ...ಕನಸುಗಳು...

ಹೊರನೋಡಿದರೆ ಹತ್ತಾರು... ನೂರಾರು ... ಜೀವಗಳ ಪಯಣ..ನೂರಾರು ದಾರಿಗಳು ...ಕನಸುಗಳು...

ಅವುಗಳೆಲ್ಲದರ ನಡುವೆ ನಮ್ಮದೂ ಒಂದು ದಾರಿ... ಗುರಿ... ಕನಸುಗಳು..... ಅದೆಲ್ಲವೂ ಸ್ಪಷ್ಟ....!

20 ಮಾರ್ಚ್ 2008

ಜಲ - ದೇವರು....





ಇಂದು ವಿಶ್ವ ಜಲ ದಿನಾಚರೆಣೆ.....

ಭಗವಂತ ಮತ್ತು ಜಲ.....

ಭಗವಂತನಿಗೆ ಜಾತ್ರೆಯ ನಂತರ ನೀರಲ್ಲಿ ಓಕುಳಿ.... ಉತ್ಸವ...

ಭಕ್ತರಿಗೆ ಸಂಭ್ರಮ.... ಜಲ... ಜಲ.... ಧಾರೆ...

"ಅವನಿದ್ದಾಗ" ಶುದ್ದ ಜಲ... ನೀರ ನೆನಪು....

"ಅವನಿಲ್ಲದಾಗ" ಅದು 'ಬರೀ' ಜಲ...

14 ಮಾರ್ಚ್ 2008

ದಾರಿ ಯಾವುದಯ್ಯಾ...?



ದಾರಿ ಮುಂದಿದೆ...... ಗುರಿಯಿಲ್ಲ......!

ಹಾಗಾಗಿಯೇ ನಮ್ಮದು ಗೊತ್ತು ಗುರಿಯಿಲ್ಲದ ಬದುಕು....

ರಸ್ತೆಯೇ ಬದುಕಿನ ದಾರಿ.... ಬದುಕೇ ರಸ್ತೆ....!.

ಸಂಸಾರದ ನೊಗ ಇಲ್ಲಾರಿಗೆ ? ಹೊರುವೆಯಾ ನೀ "ಬಸವ" ?.

09 ಮಾರ್ಚ್ 2008

ರಂಗದ ಹಿಂದೆ... ಚೌಕಿಯೊಳಗೆ....!



ರಂಗ ಸ್ಥಳದ ಹಿಂದಿನ ತಯಾರಿ ಹೀಗೆ... ರಾತ್ರಿಯಿಡೀ .... ಬಣ್ಣ...ಬಣ್ಣ....

ಬಣ್ಣದ ಬದುಕು ಆರಂಭವಾಗುವುದೇ ಇಲ್ಲಿ....

ರಂಗದಲ್ಲಿ ಬಣ್ಣವಿದ್ದರೆ ಚಂಡೆ - ಮದ್ದಳೆ... , ಶ್ರುತಿ ಎಲ್ಲವೂ ಇದೆ...

ರಂಗದ ಹಿಂದೆ ಏಕಾಂಗಿ......! ಆ ಕಡೆ .... ಈ ಕಡೆ ನೋಡುವವರೇ.....! ಚಂಡೆಯೂ ಇಲ್ಲ..... ಮದ್ದಳೆಯೂ ಇಲ್ಲ ....

ಭಾಗವತರು ಮೊದಲೇ ಇಲ್ಲ.... ಶೃತಿಯೂ ಇಲ್ಲ.....

06 ಮಾರ್ಚ್ 2008

ತುಳುನಾಡ ಹಂಪಿ...



ಶಿಲೆಯಲಿ ನೂರೆಂಟು ಕನಸುಗಳ ಕಾಣುವ....

ಭಕ್ತನಿಗೆ ಬದುಕಿಗೆ ದಾರಿ ತೋರುವ ಈ ಗುಡಿಯೆಲ್ಲಾ ಶಿಲಾಮಯ.... ಎಲ್ಲೆಲ್ಲೂ ಶಿಲೆಗಳೆ....

04 ಮಾರ್ಚ್ 2008

ಹಿಮಗಿರಿ....



ಮುಂಜಾನೆಯ ಬೆಳಕು ಚೆಲ್ಲುವ ಮುನ್ನ...

ಹಳ್ಳಿಯೊಳಗೆ ಕೋಗಿಲೆ ಕೂಗುವ ಸಮಯದಿ ....

ಮಂಜು ಕವಿದ ಬಾನು ... ಹನಿ.. ಹನಿ ..ಇಬ್ಬನಿ ಕರಗಿ ಭುವಿಗೆ ತಾಗುತಿದೆ....

ಆಗ ದೂರದ ಬೆಟ್ಟವೆಲ್ಲಾ ಹಿಮ"ಗಿರಿ"

01 ಮಾರ್ಚ್ 2008

ಮೊಬೈಲ್ ಮಾಯೆ..



ಗಿರಿ ಕಾನನಗಳ ನಡುವೆಯೆ ಮೊಬೈಲ್ ಹುಡುಕಾಟ.....! ಹುಡುಗಾಟ.....?

ಅದುವೇ ಜಗದ ಜೀವನ...! ಅದೊಂದಿದ್ದರೆ ಜನುಮ ಸಾರ್ಥಕ.....?

28 ಫೆಬ್ರವರಿ 2008

ಪರಿಸರ ಪ್ರೇಮಿ ಬೈಕ್...!?



ನ್ಯಾನೋ ಏಕೆ ? ನಾನು ಸಾಕೇ...?

ಇದು ಪರಿಸರ ಪೇಮಿಯಂತೆ. ಹಾಗೆಂದು ಅರಣ್ಯ ಇಲಾಖೆ ಒಪ್ಪಿದರೆ ರಸ್ತೆಗೆ ರೆಡಿ. ಬೆಲೆ ಕೇವಲ 100 ರೂ.

ಚಿತ್ರವನ್ನು ಕಳುಹಿಸಿದವರು ಸುಬ್ರಹ್ಮಣ್ಯದ ವೆಂಕಟೇಶ್ ಕೆ.ಆರ್

27 ಫೆಬ್ರವರಿ 2008

ಒಂಟಿ ಜೀವ...



ದೂರದಲ್ಲೆಲ್ಲಾ ಹಸಿರು..... ಹಸಿರು.....

ನಾನಿಲ್ಲಿ ಒಂಟಿ.. "ಬಡಕಲು" ಜೀವ.....

ಈ ಜಗವೇ ಹಾಗಲ್ಲವೇ "ಹಸಿರಿ"ದ್ದೆಡೆ ಜನ ... ಜನಸಾಗರ...

26 ಫೆಬ್ರವರಿ 2008

ಬಿಸಲೆಯ ಮಧ್ಯೆ...

ಇದು ಬಿಸಲೆಯ ಕಾನನದ ಸೊಬಗಿನ ಮಧ್ಯೆ ಹರಿಯುವ ಚಂದದ ನದಿ



ನೀರ ಧಾರೆ...

ಪ್ರೀತಿಯ ಹೊಳೆ..

ಹರಿಯುತಿದೆ ಓ ಗೆಳೆಯ....