16 ಜೂನ್ 2009

ಹೆಬ್ಬಾಗಿಲು...
ದಾರಿಯಿದೆ.. ಸಾಗಬೇಕಿದೆ ಬಲು ದೂರ...

ತಲೆಯ ಮೇಲಿದೆ ಒಂದಷ್ಟು ಹೊರೆ...

ಬದುಕಲ್ಲೂ ಹಾಗಲ್ವೇ....

ಆಸೆಗಳ... ಕನಸುಗಳ ಹೊರೆಯನ್ನು ಹೊತ್ತು...

ಅವಕಾಶಗಳ ಹೆಬ್ಬಾಗಿಲ ಮುಂದೆ ದಾಟಿ ಸಾಗಿದಾಗ....

ಅಲ್ಲೊಂದು ಲೋಕ ಶುರುವಾಗುತ್ತದೆ.... ಮನಸ್ಸೂ ನಿರಾಳವಾಗುತ್ತದೆ...

ಆದರೆ ಗುರಿ ತಲುಪಲು ಬಾಕಿಯಿದೆ ಇನ್ನೂ ದೂರ...

14 ಜೂನ್ 2009

ಮರಕ್ಕೆ ಮರವೇ ಆಧಾರ....ಅದು ಹೊರಟಿತ್ತು ಎತ್ತಲೋ ದೂರ...

ದಾರಿ ಮಧ್ಯೆ ಸುಸ್ತಾಗಿ ಮಲಗಿತ್ತು ಅಡ್ಡ....

ಮತ್ತೆ ಮೇಲದ್ದಾಗ ಇಳಿಯಲಾಗದೆ ಒದ್ದಾಡಿತು...ಆಗ ನೆರವಾದದ್ದು ಮರ....

ಮರಕ್ಕೆ ಮರವೇ ಆಸರೆಯಾಯಿತು ಇಲ್ಲಿ....

ಬದುಕು ಕೂಡಾ ಹಾಗಲ್ಲವೇ ......

ಸೋತು ನಿಂತಾಗ ನೆರವಿಗೆ ಬೇರಾರು ಬಾರಲಾರರು...

ಅದುವರೆಗೆ ಬದುಕನ್ನು ಸಾಗಿಸುತ್ತಿದ್ದ ಎಲ್ಲಾ ನೋವು ನಲಿವುಗಳು ಕೂಡಾ

ಅಶಕ್ತವಾದಾಗ ನೆರವಿಗೆ ಬರುವುದು ಯಾವುದು...??