25 ಏಪ್ರಿಲ್ 2008

ತಂತಿ-ಬೆಂಕಿಯ ಆಟ...?
"ತಂತಿ"ಯೊಳಗೆ ಬೆಳಕೇ..? "ಬೆಳಕಿ"ನೊಳಗೆ ತಂತಿಯೇ..?

ಎಲ್ಲವೂ ಚಂಚಲ.... ಇದು ಅದುವೋ... ಅದು ಇದುವೋ...?

ನಾಗಾಲೋಟದ ಮನಸ್ಸಿಗೆ ಹೊಳೆಯುವುದು ನೂರೆಂಟು ಯೋಚನೆ.. ಹತ್ತಾರು ಕಲ್ಪನೆ...

ಆದರೆ ನಿಜಾಂಶ ಅರಿತಾಗ.......
"ಅದೆಲ್ಲವೂ" ಭ್ರಮೆ...!!?

24 ಏಪ್ರಿಲ್ 2008

ತಾಳ ತಪ್ಪಿದಾಗ.....ತಾಳ ತಪ್ಪಿದಾಗ ಪರದೆಯ ಹಿಂದಿನ ಕಸರತ್ತು...!

ಆಸರೆಯಾದರು ಒಂದಷ್ಟು ಜನ.... ಉಳಿಯಿತು ಮಾನ...!

ಬದುಕಿನ ವೇದಿಕೆಯಲ್ಲೂ ಹಾಗಲ್ವೇ...!?.

ತಾಳ ತಪ್ಪಿದಾಗ...... ಪರದೆ ಸರಿಯುವ ಹೊತ್ತು ಬಂದಾಗ....

ಬರುವರೇ ಅಷ್ಟು ಜನ...? ನೆರವಾಗುವರೇ "ನಮ್ಮ" ಜನ...?

ಪರದೆಯ ಮುಂದೆ ನಾವೊಬ್ಬರೇ....

ಅದರ ಹಿಂದೆ ಜನರಿದ್ದರೇ ನಾವು "ಜನ"..ಇಲ್ಲದಿದ್ದರೆ ನಾವು "ನಿರ್ಜನ"

19 ಏಪ್ರಿಲ್ 2008

ಹೊತ್ತು ಮುಳುಗುವ ಹೊತ್ತು....ಸೂರ್ಯ ಮುಳುಗುವ ಸಮಯ....

ತುರ್ತು... ಅವಸರ... ಗೂಡು ಸೇರಿಕೊಳ್ಳುವ ತವಕ....

ಬದುಕಲ್ಲೂ ಹಾಗಲ್ಲವೇ...?

ಬದುಕಿನ ಮುಸ್ಸಂಜೆಯಲ್ಲಿ ಎಲ್ಲವೂ ತುರ್ತು....

ಅವರನ್ನು... ಇವರನ್ನು ನೋಡುವ.. ಮಾತನಾಡುವ ತವಕ...

"ಗೂಡು" ಸೇರುವ ತನಕ....!

16 ಏಪ್ರಿಲ್ 2008

ಅರಳಿದ ಹೂವು....ಒಂದು ಮಳೆಯು ಇಳೆಗೆ ಬೀಳಲು ..

ಅರಳೀತು ಹೇಗೆ ಹೂವು [ಲಿಲ್ಲಿ]

ಬದುಕಲ್ಲೂ ಹಾಗೇ ಅರಳೀತೇ ಪ್ರೀತಿ..?

ಕರುಣೆ ಇಲ್ಲದ ಮೇಲೆ ಅರಳೀತು ಹೇಗೆ.....?

12 ಏಪ್ರಿಲ್ 2008

"ಒಡಲಿ"ಗೆ "ಕೊಡಲಿ".....!?"ಒಡಲಿಗೆ" ಸೇರುವ ಕಶ್ಮಲವ ತಡೆವವರಾರು...?

ಅಲ್ಲೊಂದಿಷ್ಟು.... ಇಲ್ಲೊಂದಿಷ್ಟು "ಮಲಿನ"ಗಳು ಸೇರುತ್ತಲೇ ಹೋಗುತ್ತವೆ.....

ಆದರೂ ಅದೆಲ್ಲ ತೊಡೆದು ಹಾಕಲಾರದೆ..... ಒಡಲೊಳಗೆ ಸೇರದಂತೆ ಮಾಡಲಾಗದೆ....

ಅಸಹಾಯಕ ಈ ಬಡ ಜೀವ..... ನೋಡುತ್ತಾ .... ನೋಡುತ್ತಾ ಕೂರುತಿದೆ ಹಾಗೆ ಸುಮ್ಮನೆ.....

10 ಏಪ್ರಿಲ್ 2008

ಬದುಕಿನ ಪಯಣ....?ಇದು "ಬದುಕಿ"ನ ಪಯಣ.....

ಬದುಕಿನ ಹಾದಿಯಲ್ಲಿ ಕಂಡ "ಹೂವಿನ" ನೆನಪುಗಳು ಎಷ್ಟು ಚಂದ....

"ದೋಣಿ"ಯಲ್ಲಿ ಕುಡುಗೋಲು ಹಾಕಲು "ಒಬ್ಬನೇ".......!!

ಆದರೂ "ದಡ" ಸೇರದ ಬದುಕು.....! ಸಾಗಬೇಕು ದೂರ.... ದೂರ....?

ಇನ್ನೆಷ್ಟು ದೂರ "ತೀರ"ವ ಸೇರಲು....?


[ಚಿತ್ರ :"ನೆಟ್" ನೋಟ]

08 ಏಪ್ರಿಲ್ 2008

ಮರೆಯದ ನೆನಪುಗಳು......
ಬದುಕಿನ ಸಂಜೆಯಲ್ಲಿ ಪಯಣ.....

ದಾರಿ ಯಾವುದೋ....! ನಡೆ ಎಲ್ಲಿಗೋ...?

ಆದರೆ ಅದುವರೆಗಿನ ನಡೆ-ನುಡಿ ಸತ್ಯ....

ನೊಗ ಬಿಚ್ಚಿದ ಎತ್ತಿನಂತೆ, ಗಾಡಿ ಕಳಚಿದ ಚಕ್ರದಂತೆ...ನಿತ್ಯ ಸತ್ಯ...

[ಚಿತ್ರ ಮಾತ್ರಾ : "ನೆಟ್" ನೋಟ]

06 ಏಪ್ರಿಲ್ 2008

"ದೂರ"ದ ಬೆಟ್ಟ...ದೂರದ ಬೆಟ್ಟ ಕಣ್ಣಿಗೆ ನುಣ್ಣನೆ.....

ಹತ್ತಿರ ... ಹತ್ತಿರ ... ಸಾಗಿದಷ್ಟು ಅದರ ಅಂತರ್ಯದ ಅರಿವಾಗುತ್ತದೆ.....

ಬದುಕಿನ ಪಥದಲ್ಲೂ ಅಂತಹವರು ಎಷ್ಟು ಮಂದಿ...??

02 ಏಪ್ರಿಲ್ 2008

ನೊಗವ ಬಿಚ್ಚಿ ಕಾಯುವ.....ನೇಗಿಲಯೋಗಿಯ ಮಿತ್ರ....ನೊಗವ ಬಿಚ್ಚಿ ಗಾಡಿ ಕಾಯುವ....!

ದಿನವಿಡೀ ದುಡಿದು ಸುಸ್ತಾಗಿ ಕೊನೆಗೊಂದು ನಿಮಿಷದ ವಿಶ್ರಾಂತಿ...

ಆದರೂ ಇವ ನೇಗಿಲಯೋಗಿಗೆ ಶರಣು.. ನೇಗಿಲಯೋಗಿ ಇವನಿಗೆ ಶರಣು...

ಬದುಕೂ ಹಾಗಲ್ಲವೇ,"ಇವನು - ಅವನಿಗೆ" : "ಅವನು - ಇವನಿಗೆ"....

ಹಾಗಿದ್ದರೇ ಪರಿಪೂರ್ಣ...!!

01 ಏಪ್ರಿಲ್ 2008

ಚೆಲುವಿನ ಚಿತ್ತಾರ .....!?

ಶಿಲೆಗಳು ಸಂಗೀತವಾ.......ಅಲ್ಲ ಇದು ಸಂಗೀತವಲ್ಲ.....

ಶಿಲೆಗಳು ಚಿತ್ತಾರವ ಮೂಡಿಸಿವೆ....ನೀರ ಹರಿವೆಗೆ ತಿದ್ದಿ ತೀಡಿದ ಸ್ಪರ್ಶ....?

ಕೊನೆಗೂ ಮನಮೋಹಕ "ಚೆಲುವಿನ ಚಿತ್ತಾರ"....!?

ಮನಸ್ಸಿನೊಳಗೂ ಅದೆಷ್ಟು "ಚಿತ್ತಾರ"ಗಳು....!?