11 ಮಾರ್ಚ್ 2010

ಇಲ್ಲಿ ಬದುಕಿಗೂ ಬೆಲೆ ಇದೆ . . . !

ಅಣ್ಣಾ ಕೇಳಿದಿರಾ ಕಾಗೆಯ ಕೂಗು . .

ಕಾಗೆಯೊಂದು ಸತ್ತು ಬಿದ್ದಿದೆ ಇಲ್ಲಿ . .



ಹಾರಿ ಬಂತೊಂದು ಕಾಗೆ. . .



ಅದಕೂ ಇದೆ ಭಾವಬಂಧ. . . ಸಂಬಂಧ .

ಇಲ್ಲಿಲ್ಲ ಜಾತಿಯ ಬಂಧ ...

ಕರೆದಿದೆ ತನ್ನ ಬಳಗವ ಎಲ್ಲಾ. . .



ಬಂದ ತನ್ನವರೆಲ್ಲಾ ಸುತ್ತಿದರು ಜೀವದ ಸುತ್ತ. .

ಆದರೂ ಒಂದು ಆತ್ಮದ ರಕ್ಷಣೆಗೆ ತೊಟ್ಟಿತು

ಒಂಟಿ ಗೆಳೆಯ. . .



ಅದು ಸತ್ತು ಮಲಗಿದೆ ಎಂದು ರೋದಿಸಿದೆ ಎಲ್ಲವೂ. .

ಆದರೂ ಇನ್ನೊಂದು ವಾಹನ ಅಡಿಗೆ ಬೀಳದಿರಲಿ ಎಂದು

ರಸ್ತೆ ಪಕ್ಕಕ್ಕೆ ಎಳೆದಿದೆ ದೇಹ. .



ಈ ಬಂಧ ಎಲ್ಲಿದೆ ನಮ್ಮೊಳಗೆ...

ಇಲ್ಲೆಲ್ಲಾ ಇರುವುದೊಂದೇ ಜಾತಿ .. ಧರ್ಮದ ಬಂಧ...

09 ಮಾರ್ಚ್ 2010

ಗುರಿಯತ್ತ ಹೆಜ್ಜೆ. . . . .



ಮುಂದಿದೆ ಗುರಿಯ ದಾರಿ. . .

ಹಿಂದಿದೆ ನೆನಪುಗಳ ದಾರಿ . . .

ದೂರದಿಂದ ಹೊರಟಿದೆ ಇದೆರಡೂ ಜೊತೆಯಾಗಿ. .

ನೆನಪು ಮತ್ತು ಗುರಿಯ ತಾಳ ತಪ್ಪಿದರೆ ...?

ಎಲ್ಲಿದೆ ಗೆಲುವು..?......

ಬದುಕಲ್ಲೂ ಅದೇ ಅಲ್ಲವೇ . . .!!??

04 ಮಾರ್ಚ್ 2010

ಇಬ್ಬನಿ ದಾರಿ .....



ಮುಂಜಾವಿನ ಇಬ್ಬನಿ . . .

ಬಿದ್ದಿದೆ ದಾರಿಯುದ್ದಕ್ಕೂ ಹರಡಿದೆ ಹನಿ ಹನಿ . . !!.

ಬದುಕಿನ ದಾರಿಯೂ ಹಾಗಲ್ಲವೇ . . .

ನೋವು . . ನಲಿವು . . ಸಂತಸವೆಂಬ ಹನಿಗಳೂ ...

ದಾರಿಯುದ್ದಕ್ಕೂ ಇರುತ್ತವೆ ಹನಿ..ಹನಿ..

ಅದೆಲ್ಲವನೂ ದಾಟಿದಾಗಲೇ . . ನೆಮ್ಮದಿಯ "ಸೂರ್ಯ" ಒಲಿವನು ..

ಅಲ್ಲವೇ . . . !!!