15 ಮೇ 2008

ನೆಲವ ಬಿಟ್ಟು ನೀರ ಮೇಲೆ....



ನೆಲವ ಬಿಟ್ಟು ನೀರ ಮೇಲೆ...!

ನೀರಿನೊಳಗಾದಾಗ ನೋಡುವವರೇ ಹಲವಾರು.... ಎನ್ನ ರಕ್ಷಿಸುವವರಾರು ......!!?

ನಮ್ಮ ಬದುಕಲ್ಲೂ ಹಾಗಲ್ಲವೇ....

ಗೆದ್ದಾಗ ಹತ್ತಿರವಿದ್ದವರು .... ಸೋತಾಗ ನೋಡುವವರೇ ಎಲ್ಲರು.....!

ಎತ್ತಲು ಬರುವವರು ಯಾರು....??


[ಚಿತ್ರವನ್ನು ನನ್ನ ಮಿತ್ರ ಆತ್ಮ ಕಳುಹಿಸಿದ್ದು]

4 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಮಹೇಶ್,

ಚಿತ್ರ ನೋಡಿ ಎದೆಯತುಂಬೆಲ್ಲಾ ನೋವಿನ ಅಲೆಯೆದ್ದಿದೆ..! ಇದು ಖಸಾಯಿ ಖಾನೆಯ ಚಿತ್ರವೇ? ಅಥವಾ ದನವೊಂದು ನೀರಿನ ಹೊಂಡದಲ್ಲಿ ಬಿದ್ದಾಗ ತೆಗೆದಿದ್ದಾ? ನಿಮ್ಮ ಮಿತ್ರ ’ಆತ್ಮ’ ಚಿತ್ರ ಕಳುಹಿದ್ದು ಮಾತ್ರವಲ್ಲದೇ ಆ ಮೂಕ ಪ್ರಾಣಿಯ ಪ್ರಾಣವನ್ನೂ ಉಳಿಸುವ ಯತ್ನವನ್ನೂ ಮಾಡಿರುವನೆಂದುಕೊಂಡಿರುವೆ??!

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ತೇಜಸ್ವಿನಿಯವರೇ ಆತಂಕ ಬೇಡ..ಇದು ಹೋರಿಯೊಂದು ಬಾವಿಯೊಂದಕ್ಕೆ ಬಿದ್ದಿದ್ದಾಗ ತೆಗೆದ ಚಿತ್ರ. ನೀವು ಹೇಳಿದಂತೆ , ನಾನು ಅಲ್ಲಿ ಉಲ್ಲೇಖಿಸಿದಂತೆ.ಅನೇಕರು ಅಲ್ಲಿ ಸೇರಿದ್ದರು.ಆದರೆ ರಕ್ಷಿಸುವವರಾರು ಕಾಣಿಸಿಕೊಳ್ಳಲಿಲ್ಲ.ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು "ಜೀವ" ಬದುಕಿಸಿದರು.

ತೇಜಸ್ವಿನಿ ಹೆಗಡೆ ಹೇಳಿದರು...

ಮಹೇಶ್,

ದನ ಬದುಕಿರುವ ಸಿಹಿ ಸುದ್ದಿ ಕೇಳಿ ಮನಸ್ಸೀಗ ಎಷ್ಟೋ ನಿರಾಳವಾಗಿದೆ..ಧನ್ಯವಾದಗಳು.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಮಹೇಶ್ ಅವರೆ...
ಚಿತ್ರ ನೋಡಿ ಕರುಳು ಕಿವುಚಿದಂತಾಯಿತು. ಕಮೆಂಟಿಸಲು ಬಂದಾಗ ತೇಜಸ್ವಿನಿಯವರಿಗೆ ನೀವಿತ್ತ ಉತ್ತರದಿಂದ ಆ ಜೀವ ಬದುಕಿತೆಂಬುದು ಗೊತ್ತಾದಾಗ ಏನೋ ಸಂತಸ ನಾನೇ ನೀರೊಳಗೆ ಮುಳುಗದೇ ಬದುಕೆದ್ದು ಬಂದಷ್ಟು ಖುಷಿ.