02 ಫೆಬ್ರವರಿ 2011

ಇದೇ ರಸ್ತೆನಾ . .?



ಇದು ರಸ್ತೆನಾ. . ?

ರೋಡ್ ಕಂ ತೋಡ್ . .?

ನಾವ್ ಕಟ್ಟಿದ ವೆಹಿಕಲ್ ಟ್ಯಾಕ್ಸ್ ಎಲ್ಲೋಗುತ್ತೆ?

ಇದೇ ಹೊಂಡಕ್ಕೋ . ? ಅಲ್ಲ ಇಂತಹ "ಹೊಂಡ"ಗಳಿಗೋ. . ?

19 ಸೆಪ್ಟೆಂಬರ್ 2010

ರೋಡ್ ಇಲ್ಲದ ಮೇಲೆ . .





ರೋಡ್ . . ರೋಡ್ . . ರೋಡ್ . .

ಗ್ರಾಮೀಣ ಭಾಗದಲ್ಲಿ ರಸ್ತೆ ದುರವಸ್ಥೆಯಿಂದಾಗಿ ವಿದ್ಯಾರ್ಥಿಗಳ ಪಾಡು ಇದು.

24 ಜುಲೈ 2010

ಹಳ್ಳಿ ಲೈಫ್ . . . !!



ರಸ್ತೆ ಇದೆ . . . ಆದ್ರೆ ಹೋಗೋಕಾಗಲ್ಲ. . . !

ಸೇತುವೆ ಇದೆ . . . ಆದ್ರೆ ಉಪಯೋಗಕ್ಕಿಲ್ಲ. . .!

ಬಸ್ಸಿಸೆ . . . ಆದ್ರೆ ಸಮಯಕ್ಕೆ ಸರಿಯಾಗಿ ಬರಲ್ಲ . .!

ವಾಹನ ಇದೆ. . . ಆದ್ರೆ ಅದು ಪೇಟೇಗೇ ಹೋಗಲ್ಲ . . !

ಇದ್ಯಾವುದು ಅಂತ ನೀವ್ ಹೇಳ್ತಿರಾ. . .??

ಅದೇ ಹಳ್ಳಿ ಜನ . . ಹಳ್ಳಿ ಲೈಫ್ . .!!

09 ಜುಲೈ 2010

ಜಲವೈಭವ . . . .





ಇದು ಜಲ ಕಾವ್ಯ. . . !!

ಕಾನನದ ನಡುವಿನಿಂದ ಸೀಳಿ ಬರುವ ಈ "ಜಲ"ಪಾತಕ್ಕೆ ಏನೊಂದು ಶಕ್ತಿ ?.


ನೀರ ಹನಿಗಳೊಂದಿಗೆ ಲೀನವಾಗುವ . . .

ಮನಸ್ಸನ್ನು ತಂಗಾಳಿಯಲ್ಲಿ ತೇಲಿಸಿ ಬಿಡುವ ಈ ಜಲಧಾರೆಗೆ . . .

ಅದೇನು ಶಕ್ತಿ . . . . !!

04 ಜುಲೈ 2010

11 ಮಾರ್ಚ್ 2010

ಇಲ್ಲಿ ಬದುಕಿಗೂ ಬೆಲೆ ಇದೆ . . . !

ಅಣ್ಣಾ ಕೇಳಿದಿರಾ ಕಾಗೆಯ ಕೂಗು . .

ಕಾಗೆಯೊಂದು ಸತ್ತು ಬಿದ್ದಿದೆ ಇಲ್ಲಿ . .



ಹಾರಿ ಬಂತೊಂದು ಕಾಗೆ. . .



ಅದಕೂ ಇದೆ ಭಾವಬಂಧ. . . ಸಂಬಂಧ .

ಇಲ್ಲಿಲ್ಲ ಜಾತಿಯ ಬಂಧ ...

ಕರೆದಿದೆ ತನ್ನ ಬಳಗವ ಎಲ್ಲಾ. . .



ಬಂದ ತನ್ನವರೆಲ್ಲಾ ಸುತ್ತಿದರು ಜೀವದ ಸುತ್ತ. .

ಆದರೂ ಒಂದು ಆತ್ಮದ ರಕ್ಷಣೆಗೆ ತೊಟ್ಟಿತು

ಒಂಟಿ ಗೆಳೆಯ. . .



ಅದು ಸತ್ತು ಮಲಗಿದೆ ಎಂದು ರೋದಿಸಿದೆ ಎಲ್ಲವೂ. .

ಆದರೂ ಇನ್ನೊಂದು ವಾಹನ ಅಡಿಗೆ ಬೀಳದಿರಲಿ ಎಂದು

ರಸ್ತೆ ಪಕ್ಕಕ್ಕೆ ಎಳೆದಿದೆ ದೇಹ. .



ಈ ಬಂಧ ಎಲ್ಲಿದೆ ನಮ್ಮೊಳಗೆ...

ಇಲ್ಲೆಲ್ಲಾ ಇರುವುದೊಂದೇ ಜಾತಿ .. ಧರ್ಮದ ಬಂಧ...

09 ಮಾರ್ಚ್ 2010

ಗುರಿಯತ್ತ ಹೆಜ್ಜೆ. . . . .



ಮುಂದಿದೆ ಗುರಿಯ ದಾರಿ. . .

ಹಿಂದಿದೆ ನೆನಪುಗಳ ದಾರಿ . . .

ದೂರದಿಂದ ಹೊರಟಿದೆ ಇದೆರಡೂ ಜೊತೆಯಾಗಿ. .

ನೆನಪು ಮತ್ತು ಗುರಿಯ ತಾಳ ತಪ್ಪಿದರೆ ...?

ಎಲ್ಲಿದೆ ಗೆಲುವು..?......

ಬದುಕಲ್ಲೂ ಅದೇ ಅಲ್ಲವೇ . . .!!??

04 ಮಾರ್ಚ್ 2010

ಇಬ್ಬನಿ ದಾರಿ .....



ಮುಂಜಾವಿನ ಇಬ್ಬನಿ . . .

ಬಿದ್ದಿದೆ ದಾರಿಯುದ್ದಕ್ಕೂ ಹರಡಿದೆ ಹನಿ ಹನಿ . . !!.

ಬದುಕಿನ ದಾರಿಯೂ ಹಾಗಲ್ಲವೇ . . .

ನೋವು . . ನಲಿವು . . ಸಂತಸವೆಂಬ ಹನಿಗಳೂ ...

ದಾರಿಯುದ್ದಕ್ಕೂ ಇರುತ್ತವೆ ಹನಿ..ಹನಿ..

ಅದೆಲ್ಲವನೂ ದಾಟಿದಾಗಲೇ . . ನೆಮ್ಮದಿಯ "ಸೂರ್ಯ" ಒಲಿವನು ..

ಅಲ್ಲವೇ . . . !!!

17 ಫೆಬ್ರವರಿ 2010

ಪ್ರತಿ"ಬಿಂಬ" . . .!




ಇದು "ಬಿಂಬ"ದ ಪ್ರತಿಬಿಂಬ . . !

ಅಂದರೆ "ದೇವರ" ಪ್ರತಿರೂಪ . . !!

ದೇವರೆ0ದರೆ ಅದೇ ಅಲ್ಲವೇ . . .?

ಆತ್ಮದ ಪ್ರತಿ"ಬಿಂಬ".....!

ಮನುಷ್ಯತ್ವದ ಪ್ರತಿ"ಬಿಂಬ"......!!


06 ಜನವರಿ 2010

ಇಳಿ ಹೊತ್ತು . .



ಸಂಜೆಯ ಹೊತ್ತಿನಲ್ಲಿ ಎಲ್ಲವೂ ರಂಗುರಂಗಾಗಿದೆ..

ಎಲ್ಲಾ ಆಟಗಳಿಗೂ ಒಂದು "ಬಂಧ"ವಿರುತ್ತದೆ..

ಎಲ್ಲವನ್ನೂ ಅವಲೋಕಿಸುವ ಸಮಯವೂ ಅದು . . ..

ಹಾಗಾಗಿ ಎಲ್ಲಕ್ಕೂ ಬೇಕು ಎಚ್ಚರ..

ಸೂರ್ಯ ಮುಳುಗುವ ಹೊತ್ತು . .

ಬಾನು ಕೆಂಪಾಗಿದೆ . .



ಬಾನು ಕೆಂಪೇರಿದೆ . .

ಭಾಸ್ಕರ ಭುವಿಡೆಗೆ ಇಳಿದಿದ್ದಾನೆ . . .

ಗಿಡ ಮರಗಳು ಹೇಳುತಿವೆ ಇಂದಿನ ವಿದಾಯ....

16 ಜೂನ್ 2009

ಹೆಬ್ಬಾಗಿಲು...




ದಾರಿಯಿದೆ.. ಸಾಗಬೇಕಿದೆ ಬಲು ದೂರ...

ತಲೆಯ ಮೇಲಿದೆ ಒಂದಷ್ಟು ಹೊರೆ...

ಬದುಕಲ್ಲೂ ಹಾಗಲ್ವೇ....

ಆಸೆಗಳ... ಕನಸುಗಳ ಹೊರೆಯನ್ನು ಹೊತ್ತು...

ಅವಕಾಶಗಳ ಹೆಬ್ಬಾಗಿಲ ಮುಂದೆ ದಾಟಿ ಸಾಗಿದಾಗ....

ಅಲ್ಲೊಂದು ಲೋಕ ಶುರುವಾಗುತ್ತದೆ.... ಮನಸ್ಸೂ ನಿರಾಳವಾಗುತ್ತದೆ...

ಆದರೆ ಗುರಿ ತಲುಪಲು ಬಾಕಿಯಿದೆ ಇನ್ನೂ ದೂರ...

14 ಜೂನ್ 2009

ಮರಕ್ಕೆ ಮರವೇ ಆಧಾರ....



ಅದು ಹೊರಟಿತ್ತು ಎತ್ತಲೋ ದೂರ...

ದಾರಿ ಮಧ್ಯೆ ಸುಸ್ತಾಗಿ ಮಲಗಿತ್ತು ಅಡ್ಡ....

ಮತ್ತೆ ಮೇಲದ್ದಾಗ ಇಳಿಯಲಾಗದೆ ಒದ್ದಾಡಿತು...



ಆಗ ನೆರವಾದದ್ದು ಮರ....

ಮರಕ್ಕೆ ಮರವೇ ಆಸರೆಯಾಯಿತು ಇಲ್ಲಿ....

ಬದುಕು ಕೂಡಾ ಹಾಗಲ್ಲವೇ ......

ಸೋತು ನಿಂತಾಗ ನೆರವಿಗೆ ಬೇರಾರು ಬಾರಲಾರರು...

ಅದುವರೆಗೆ ಬದುಕನ್ನು ಸಾಗಿಸುತ್ತಿದ್ದ ಎಲ್ಲಾ ನೋವು ನಲಿವುಗಳು ಕೂಡಾ

ಅಶಕ್ತವಾದಾಗ ನೆರವಿಗೆ ಬರುವುದು ಯಾವುದು...??